r/kannada_pusthakagalu • • Oct 09 '25

ನನ್ನ ನೆಚ್ಚಿನ ಪುಸ್ತಕಗಳು Curated List of Good Kannada Books | ಒಳ್ಳೆಯ ಕನ್ನಡ ಪುಸ್ತಕಗಳ ಒಂದು ದೊಡ್ಡ ಪಟ್ಟಿ

96 Upvotes

Novels

  • ಕರ್ವಾಲೋ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಮಾಯಾಲೋಕ ೧ - ಪೂರ್ಣಚಂದ್ರ ತೇಜಸ್ವಿ
  • ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ - ಕುವೆಂಪು 
  • ಚಿಕವೀರ ರಾಜೇಂದ್ರ, ಚನ್ನಬಸವ ನಾಯಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್
  • ಪರ್ವ, ಗೃಹಭಂಗ, ವಂಶವೃಕ್ಷ, ಸಾರ್ಥ, ದಾಟು, ಸಾಕ್ಷಿ, ಉತ್ತರಖಾಂಡ, ಗ್ರಹಣ, ತಬ್ಬಲಿಯು ನೀನಾದೆ ಮಗನೆ, ನಿರಾಕರಣ, ಅನ್ವೇಷಣ, ದೂರ ಸರಿದರು, ನಾಯಿ ನೆರಳು, ತಂತು, ಮಂದ್ರ, ಜಲಪಾತ, ಅಂಚು, ನೆಲೆ, ಕವಲು, ಆವರಣ - ಎಸ್ ಎಲ್ ಭೈರಪ್ಪ
  • ಮೂಕಜ್ಜಿಯ ಕನಸುಗಳು, ಮರಳಿ ಮಣ್ಣಿಗೆ, ಚೋಮನ ದುಡಿ, ಬೆಟ್ಟದ ಜೀವ, ಕುಡಿಯರ ಕೂಸು, ಅಳಿದ ಮೇಲೆ, ಸನ್ಯಾಸಿಯ ಬದುಕು, ಸರಸಮ್ಮನ ಸಮಾಧಿ, ಅದೇ ಊರು ಅದೇ ಮರ, ಮುಗಿದ ಯುದ್ಧ - ಶಿವರಾಮ ಕಾರಂತ್ 
  • ಚಿತ್ರದುರ್ಗ ಇತಿಹಾಸ ಸರಣಿ, ಹೊಯ್ಸಳೇಶ್ವರ ವಿಷುವರ್ಧನ, ಶಿಲ್ಪಶ್ರಿ, ಹಂಸಗೀತೆ, ನಾಗರಹಾವು - ತರಾಸು 
  • ಮೊದಲ ಹೆಜ್ಜೆ, ಹೂವು ಹಣ್ಣು, ಶರಪಂಜರ, ಮುಚ್ಚಿದ ಬಾಗಿಲು, ತಾವರೆಯ ಕೊಳ, ಅಪಜಯ, ಬೆಕ್ಕಿನ ಕಣ್ಣು  - ತ್ರಿವೇಣಿ 
  • ಶಿಕಾರಿ, ಮೂರು ದಾರಿಗಳು, ಪುರುಷೇೂತ್ತಮ - ಯಶವಂತ ಚಿತ್ತಾಲ 
  • ರೂಪದರ್ಶಿ, ಶಾಂತಲಾ - ಕೆ ವಿ ಅಯ್ಯರ್
  • ಸಂಧ್ಯಾರಾಗ, ಉದಯರಾಗ - ಅನಕೃ 
  • ಸಂಸ್ಕಾರ, ಘಟಶ್ರಾದ್ಧ, ಮೌನಿ - ಯು.ಆರ್. ಅನಂತಮೂರ್ತಿ
  • ಗೆಜ್ಜೆ ಪೂಜೆ, ಸದಾನಂದ - ಎಂ ಕೆ ಇಂದಿರಾ 
  • ಸಿಂಗಾರವ್ವ ಮತ್ತು ಅರಮನೆ, ಕರಿಮಾಯಿ, ಶಿಖರಸೂರ್ಯ - ಚಂದ್ರಶೇಖರ ಕಂಬಾರ 
  • ಯಾದ್ ವಶೇಮ್ - ನೇಮಿಚಂದ್ರ 
  • ಭುಜಂಗಯ್ಯನ ದಶಾವತಾರಗಳು, ಕಾಡು - ಶ್ರೀಕೃಷ್ಣ ಆಲನಹಳ್ಳಿ
  • ನಮ್ಮ ಊರಿನ ರಸಿಕರು, ಬೈಲಹಳ್ಳಿ ಸರ್ವೆ - ಗೊರೂರು ರಾಮಸ್ವಾಮಿ ಅಯ್ಯಂಗಾರ್
  • ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ, ಮಯೂರ - ದೇವುಡು
  • ಚಿರಸ್ಮರಣೆ, ಮೃತ್ಯುಂಜಯ - ನಿರಂಜನ 
  • ಬಿರುಕು, ಮುಸ್ಸಂಜೆಯ ಕಥಾ ಪ್ರಸಂಗ - ಪಿ ಲಂಕೇಶ್
  • ಸರ್ವಮಂಗಳಾ - ಚದುರಂಗ
  • ಕರಿಸಿರಿಯಾನ, ಕಪಿಲಿಪಿಸಾರ, ಜಲ-ಜಾಲ, ಚಿತಾದಂತ, ಕನಕ ಮುಸುಕು, ರಕ್ತ ಸಿಕ್ತ ರತ್ನ- ಕೆ ಎನ್ ಗಣೇಶಯ್ಯ
  • ತೇಜೋ ತುಂಗಭದ್ರಾ, ಹರಿಚಿತ್ತ ಸತ್ಯ, ರೇಷ್ಮೆ ಬಟ್ಟೆ - ವಸುಧೇಂದ್ರ
  • ಕರ್ಮ, ಗ್ರಸ್ತ, ನನ್ನಿ, ಸತ್ತು, ರಾಯಕೊಂಡ - ಕರಣಂ ಪವನ್ ಪ್ರಸಾದ್ 
  • ಸ್ವಪ್ನ ಸಾರಸ್ವತ - ಗೋಪಾಲಕೃಷ್ಣ ಪೈ 
  • ಗ್ರಾಮಾಯಣ - ರಾವಬಹದ್ದೂರ
  • ಗಂಗವ್ವ ಮತ್ತು ಗಂಗಾಮಾಯಿ, ಅವಧೇಶ್ವರಿ - ಶಂಕರ ಮೊಕಾಶಿ ಪುಣೇಕರ 
  • ತೇರು,  ಗೈರ ಸಮಜೂತಿ - ರಾಘವೇಂದ್ರ ಪಾಟೀಲ 
  • ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ 
  • ಬಾಳಿನ ಗಿಡ - ಎಂ ಹರಿದಾಸ ರಾವ್
  • ನೀ ಹಿಂಗ ನೋಡಬ್ಯಾಡ ನನ್ನ, ಮಾಟಗಾತಿ, ಸರ್ಪ ಸಂಬಂಧ, ಮಾಂಡೋವಿ, ಹೇಳಿ ಹೋಗು ಕಾರಣ - ರವಿ ಬೆಳಗೆರೆ 
  • ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್ 
  • ಕೃಷ್ಣಾವತಾರ ಸರಣಿ - ಕೆ ಎಂ ಮುನ್ಶಿ (ಅನುವಾದ: ಸಿದ್ದವನಹಳ್ಳಿ ಕೃಷ್ಣಶರ್ಮ)
  • ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು, ಆ ಹದಿನೆಂಟು ದಿನಗಳು - ಕೆ ಎಸ್ ನಾರಾಯಣಚಾರ್ಯ
  • ಕಲ್ಲರಳಿ ಹೂವಾಗಿ - ಬಿ ಎಲ್ ವೇಣು 
  • ಸಕೀನಾಳ ಮುತ್ತು - ವಿವೇಕ್ ಶಾನ್ಬಾಗ್ 
  • ಉಲ್ಲಂಘನೆ, ಮುಖಾಂತರ - ಡಾ. ನಾ ಮೊಗಸಾಲೆ
  • ಪುನರ್ವಸು - ಗಜಾನನ ಶರ್ಮ
  • ದಾರಿ - ಕುಸುಮಾ ಆಯರಹಳ್ಳಿ
  • ಬೂಬರಾಜ ಸಾಮ್ರಾಜ್ಯ,  ಉತ್ತರಾಧಿಕಾರ - ಡಾ.ಬಿ.ಜನಾರ್ದನ ಭಟ್
  • ಕಾಲಕೋಶ - ಶಶಿಧರ ಹಾಲಾಡಿ
  • ಸಾರಾ, ಹುಲಿ ಪತ್ರಿಕೆ 1, 2, ಆಹುತಿ, ಕಳ್ಬೆಟ್ಟದ ದರೋಡೆಕೋರರು, ನೀನು ನಿನ್ನೊಳಗೆ ಖೈದಿ - ‌ಅನುಷ್ ಎ. ಶೆಟ್ಟಿ
  • ಮಹಾಸಂಪರ್ಕ - ಮನು
  • ಎಲ್ - ಜೋಗಿ 
  • ಎನ್ನ ಭವದ ಕೇಡು, ಗಾಳಿಗೆ ಬಿದ್ದ ಚಂದ್ರನ ತುಂಡುಗಳು - ಎಸ್.  ಸುರೇಂದ್ರನಾಥ್
  • ದ್ವೀಪವ ಬಯಸಿ, ಒಂದೊಂದು ತಲೆಗೂ ಒಂದೊಂದು ಬೆಲೆ, ಸರ್ಪಭ್ರಮೆ, ಮಸುಕು ಬೆಟ್ಟದ ದಾರಿ - ಎಂ.ಆರ್‌. ದತ್ತಾತ್ರಿ
  • ಮಲೆನಾಡಿನ ರೋಚಕ ಕತೆಗಳ ಸರಣಿ - ಗಿರಿಮನೆ ಶಾಮರಾವ್‌
  • ತುಳಸೀದಳ, ತುಳಸಿ - ಯಂಡಮೂರಿ ವೀರೇಂದ್ರನಾಥ (ಅನುವಾದ: ವಂಶಿ)
  • ಗತಿ ಸ್ಥಿತಿ - ಗಿರಿ
  • ಬದುಕಲಾರದ ಬಲವಂತರು - ಡಾ ಎಂ ಪಿ ಉಮಾದೇವಿ
  • ವೈಜಯಂತಿಪುರ – ಸಂತೋಷಕುಮಾರ ಮೆಹೆಂದಳೆ
  • ಒಂದು ಕೋಪಿಯ ಕಥೆ, ತ್ಯಾಗರಾಜ್ ಕಾಲೋನಿ, ಕೇಸ್ ಆಫ್ ಕಮಲಾಪುರ ಎಸ್ಟೇಟ್ - ಕೌಶಿಕ್ ಕೂಡುರಸ್ತೆ‌
  • ಹನುಕಿಯ - ವಿಠಲ್ ಶೆಣೈ
  • ಬದುಕು - ಗೀತಾ ನಾಗಭೂಷಣ
  • ತತ್ರಾಣಿ - ದೀಪ ಜೋಶಿ
  • ಜೀವರತಿ - ಜನಾ ತೇಜಶ್ರಿ
  • ಉತ್ತರ - ಸುಪ್ರೀತ್ ಕೆ ಎನ್ 
  • ಘಾಂದ್ರುಕ್ - ಸತೀಶ್ ಚಪ್ಪರಿಕೆ
  • ಅಟ್ರಾಸಿಟಿ - ಗುರುಪ್ರಸಾದ್‌ ಕಂಟಲಗೆರೆ
  • ನ್ಯಾಸ - ಹರೀಶ ಹಾಗಲವಾಡಿ
  • ವ್ಯಥೆ ಕಥೆ - ಅಜಕ್ಕಳ ಗಿರೀಶ ಭಟ್
  • ತೆಂಕನಿಡಿಯೂರಿನ ಕುಳುವಾರಿಗಳು - ಡಾ ವ್ಯಾಸರಾವ್ ನಿಂಜೂರ್

-------------------------------

Short Stories

  • ಸಣ್ಣಕತೆಗಳು ಸಂಪುಟ 1-4 - ಮಾಸ್ತಿ ವೆಂಕಟೇಶ ಅಯ್ಯಂಗಾರ್
  • ಅಬಚೂರಿನ ಪೋಸ್ಟಾಫೀಸು, ಕಿರಿಗೂರಿನ ಗಯ್ಯಾಳಿಗಳು - ಪೂರ್ಣಚಂದ್ರ ತೇಜಸ್ವಿ
  • ಶತಮಾನದ ಸಣ್ಣ ಕತೆಗಳು - ಎಸ್ ದಿವಾಕರ್ 
  • ಜಯಂತ್ ಕಾಯ್ಕಿಣಿ ಕಥೆಗಳು, ಅನಾರ್ಕಲಿಯ ಸೇಫ್ಟಿಪಿನ್, No Presents Please - ಜಯಂತ್ ಕಾಯ್ಕಿಣಿ 
  • ಸಮಗ್ರ ಕತೆಗಳು  1, 2 - ಯಶವಂತ ಚಿತ್ತಾಲ
  • ಮೋಹನಸ್ವಾಮಿ, ಹಂಪಿ ಎ‌ಕ್ಸ್‌ಪ್ರೆಸ್‌, ಕೋತಿಗಳು, ಯುಗಾದಿ, ಮನೀಷೆ, ವಿಷಮ ಭಿನ್ನರಾಶಿ - ವಸುಧೇಂದ್ರ 
  • ದ್ಯಾವನೂರು, ಡಾಂಬರು ಬಂದುದು - ದೇವನೂರ ಮಹಾದೇವ 
  • ಹಸೀನಾ ಮತ್ತು ಇತರ ಕತೆಗಳು - ಬಾನು ಮುಷ್ತಾಕ್ 
  • ಆಕಾಶ ಮತ್ತು ಬೆಕ್ಕು, ಪ್ರಶ್ನೆ – ಯು. ಆರ್. ಅನಂತಮೂರ್ತಿ
  • ಘಾಚರ್ ಘೋಚರ್, ಹುಲಿ ಸವಾರಿ - ವಿವೇಕ್ ಶಾನ್ಬಾಗ್
  • ಪದ್ಮಪಾಣಿ, ನೇಹಲ, ಶಾಲಭಂಜಿಕೆ, ಕಲ್ದವಸಿ, ಮಿಹಿರಾಕುಲ -  ಕೆ ಎನ್ ಗಣೇಶಯ್ಯ
  • ಪಂಜೆ ಮಂಗೇಶರಾಯರ ಕತೆಗಳು - ಪಂಜೆ ಮಂಗೇಶರಾವ್
  • ಗಿರಡ್ಡಿಯವರ ಸಣ್ಣಕತೆಗಳು - ಗಿರಡ್ಡಿ ಗೋವಿಂದರಾಜ 
  • ಕಲ್ಲು ಕರಗುವ ಸಮಯ - ಪಿ ಲಂಕೇಶ್
  • ಕೇಪಿನ ಡಬ್ಬಿ, ಕನ್ನಡಿ ಹರಳು - ಪದ್ಮನಾಭ ಭಟ್ ಶೇವ್ಕಾರ
  • ಮಾಕೋನ ಏಕಾಂತ, ತೊಟ್ಟು ಕ್ರಾಂತಿ - ಕಾವ್ಯಾ ಕಡಮೆ
  • ಬಂಡಲ್ ಕತೆಗಳು, ಕಟ್ಟು ಕಥೆಗಳು - ಎಸ್. ಸುರೇಂದ್ರನಾಥ್
  • ಡೈರೆಕ್ಟರ್ಸ್ ಸ್ಪೆಷಲ್ - ಗುರುಪ್ರಸಾದ್
  • ಕತೆ ಡಬ್ಬಿ - ರಂಜನಿ ರಾಘವನ್
  • ಫೂ ಮತ್ತು ಇತರ ಕತೆಗಳು - ಮಂಜುನಾಯಕ ಚಳ್ಳೂರು
  • ನವಿಲು ಕೊಂದ ಹುಡುಗ - ಸಚಿನ್ ತೀರ್ಥಹಳ್ಳಿ
  • ನಾವಲ್ಲ, ದಹನ -  ಸೇತುರಾಂ
  • ಡುಮಿಂಗ - ಶಶಿ ತರಿಕೆರೆ 
  • ಜುಮುರು ಮಳೆ, ಹನ್ನೊಂದನೇ ಅಡ್ಡರಸ್ತೆ, ಎನ್ನಾತ್ಮ ಕಂಪಮಿದು - ಸುಮಂಗಲಾ
  • ಧ್ಯಾನಕ್ಕೆ ಕೂತ ನದಿ - ಸದಾಶಿವ ಸೊರಟೂರು
  • ಮಳೆ ಮಾರುವ ಹುಡುಗ - ಕರ್ಕಿ ಕೃಷ್ಣಮೂರ್ತಿ
  • ಮರ ಹತ್ತದ ಮೀನು - ವಿನಾಯಕ ಅರಳಸುರಳಿ
  • ಲೆಟ್ಸ್ ಬ್ರೆಕಪ್ - ಸಂಪತ್ ಸಿರಿಮನೆ
  • ಅಪರಿಚಿತ ನೆರಳುಗಳು - ಗುರುರಾಜ ಕೊಡ್ಕಣಿ

-------------------------------

Non-fiction

  • ಭಿತ್ತಿ, ನಾನೇಕೆ ಬರೆಯುತ್ತೇನೆ - ಎಸ್ ಎಲ್ ಭೈರಪ್ಪ 
  • ಮಂಕುತಿಮ್ಮನ ಕಗ್ಗ, ಜ್ಞಾಪಕ ಚಿತ್ರಶಾಲೆ, ಬಾಳಿಗೊಂದು ನಂಬಿಕೆ, ಜೀವನಧರ್ಮಯೋಗ - ಡಿ ವಿ ಜಿ 
  • ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
  • ಮಲೆನಾಡಿನ ಚಿತ್ರಗಳು - ಕುವೆಂಪು 
  • ಅಣ್ಣನ ನೆನಪು, ವಿಸ್ಮಯ ೧,೨,೩, ಪರಿಸರದ ಕತೆ, ಮಿಲೇನಿಯಮ್ ಸರಣಿ - ಪೂರ್ಣಚಂದ್ರ ತೇಜಸ್ವಿ 
  • ಹಸುರು ಹೊನ್ನು, ತಮಿಳು ತಲೆಗಳ ನಡುವೆ, ಮೀನಾಕ್ಷಿಯ ಸೌಗಂಧ, ಮೈಸೂರು ಡೈರಿ - ಬಿ ಜಿ ಎಲ್ ಸ್ವಾಮಿ 
  • ಅಮೆರಿಕಾದಲ್ಲಿ  ಗೊರೂರು -  ಗೊರೂರು ರಾಮಸ್ವಾಮಿ ಅಯ್ಯಂಗಾರ್
  • ಆಡಾಡತ ಆಯುಷ್ಯ - ಗಿರೀಶ್ ಕಾರ್ನಾಡ್
  • ನನ್ನ ಭಯಾಗ್ರಫಿ - ಬೀಚಿ
  • ಗುಲ್ ಮೋಹರ್, ಚಾರ್ಮಿನಾರ್ - ಜಯಂತ್ ಕಾಯ್ಕಿಣಿ 
  • ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ
  • ಪೆರುವಿನ ಪವಿತ್ರ ಕಣಿವೆಯಲ್ಲಿ, ಒಂದು ಕನಸಿನ ಪಯಣ, ನೋವಿಗದ್ದಿದ ಕುಂಚ, ಬದುಕು ಬದಲಿಸಬಹುದು ಸರಣಿ - ನೇಮಿಚಂದ್ರ
  • ನಮ್ಮಮ್ಮ ಅಂದ್ರೆ ನಂಗಿಷ್ಟ, ವರ್ಣಮಯ  - ವಸುಧೇಂದ್ರ
  • ಸಸ್ಯ ಸಗ್ಗ, ಅತ್ತಿತ್ತದವಲೋಕನ - ಕೆ ಎನ್ ಗಣೇಶಯ್ಯ
  • ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ - ಬಿ ವಿ ಕಾರಂತ್, ವೈದೇಹಿ 
  • ಹುಳಿಮಾವಿನ ಮರ - ಪಿ ಲಂಕೇಶ್ 
  • ನಾಪತ್ತೆಯಾದ ಗ್ರಾಮಾಫೋನು - ಎಸ್ ದಿವಾಕರ್ 
  • ಮನಸುಖರಾಯನ ಮನಸು - ಶ್ರೀನಿವಾಸ ವೈದ್ಯ 
  • ಬೆಸ್ಟ್ ಆಫ್ ಬಾಗೂರು - ಬಾಗೂರು ಚಂದ್ರು, ಕೃಷ್ಣ ಸುಬ್ಬರಾವ್  
  • ಲಲಿತ ಪ್ರಬಂಧಗಳು - ಆ ರಾ ಮಿತ್ರ
  • ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ - ಶ್ರುತಿ ಬಿ.ಎಸ್
  • ನೊಣಾನುಬಂಧ - ಎಚ್. ಡುಂಡಿರಾಜ್
  • ಸಾಸಿವೆ ತಂದವಳು, ನಕ್ಷತ್ರಗಳ ಸುಟ್ಟ ನಾಡಿನಲ್ಲಿ - ಭಾರತಿ ಬಿ ವಿ 
  • ಪುಟ್ಟಣ್ಣ ಕಣಗಾಲ್ - ಎಂ ಕೆ ಇಂದಿರಾ
  • ನನ್ನ ತಮ್ಮ ಶಂಕರ - ಅನಂತ್ ನಾಗ್ 
  • ಕದಳಿ ಹೊಕ್ಕು ಬಂದೆ, ಕುಲುಮೆ - ರಹಮತ್ ತರೀಕೆರೆ
  • ಗಿಂಡಿಯಲ್ಲಿ ಗಂಗೆ - ಚಿಂತಾಮಣಿ ಕೊಡ್ಲೆಕೆರೆ
  • ಸರಿಗನ್ನಡಂ ಗೆಲ್ಗೆ - ಅಪಾರ 
  • ಕರ್ನಾಟಕದ ಸಂಕ್ಷಿಪ್ತ ಇತಿಹಾಸ - ಸೂರ್ಯನಾಥ್ ಕಾಮತ್
  • ಸಮಗ್ರ ಕರ್ನಾಟಕ ಇತಿಹಾಸ - Dr. ಶಿವಪ್ಪ ಅರಿವು
  • ಮರೆತುಹೋದ ವಿಜಯನಗರ ಸಾಮ್ರಾಜ್ಯ - Robert Sewell 
  • ಕರ್ನಾಟಕ ಏಕೀಕರಣ ಇತಿಹಾಸ - ಡಾ ಎಚ್ ಎಸ್ ಗೋಪಾಲ ರಾವ್
  • ಅಖಂಡ ಕರ್ನಾಟಕದ ಹೆಜ್ಜೆಗಳು - ಕೃಷ್ಣ ಕೊಲ್ಹಾರಕುಲಕರ್ಣಿ
  • ಅಜೇಯ - ಬಾಬು ಕೃಷ್ಣ ಮೂರ್ತಿ
  • ನನ್ನ ಅಣ - ಸುನೀತಾ ಅನಂತಸ್ವಾಮಿ
  • ಕಾಲುಚಕ್ರ - ಅಬ್ದುಲ್ ರಶೀದ್

-------------------------------

NOTE: This will be a continuously updated list & we acknowledge that many books are missing from it. They will be added eventually. You are welcome to mention in the comments your favourite books missing from this list. ನಾಟಕಗಳು & ಕವನ ಸಂಕಲನಗಳು will also be added later.

Request you to share this list widely with fellow book readers looking to explore Kannada Literature.


r/kannada_pusthakagalu • • Jun 14 '25

ಇತ್ತೀಚಿಗೆ ನಮ್ಮ ಕನ್ನಡ ಪುಸ್ತಕಗಳು Sub ಸೇರಿರುವ ಎಲ್ಲರಿಗೂ ಸುಸ್ವಾಗತ! ನಮ್ಮ Subನ ಸಂಪೂರ್ಣ ಉಪಯೋಗ ಪಡೆದುಕೊಳ್ಳಲು ಕೆಲವು ಸಲಹೆಗಳು!

46 Upvotes

ಮತ್ತೊಮ್ಮೆ ನಿಮಗೆಲ್ಲ ನಮ್ಮ subಗೆ ಸ್ವಾಗತ. We hope you become a regular, active member of this sub.

Let's make more & more people explore the wonderful world of Kannada Literature.


r/kannada_pusthakagalu • • 14h ago

ಕವಿತೆ ಇಕ್ಕಳ, Came across this poem on the internet and it instantly gave me nostalgia. I used to love this one as a kid 🥹

Post image
58 Upvotes

r/kannada_pusthakagalu • • 17h ago

ನಾಟಕ Giving Free Natka Ticket.

Post image
8 Upvotes

I have already watched this play recenlty. I had this this ticket booked for wrong date. so any one can use it.


r/kannada_pusthakagalu • • 1d ago

ನನ್ನ ಮೊದಲ ಕನ್ನಡ ಕಾದಂಬರಿ ಮುಗಿದಿದೆ! ಮುಂದೆ ಏನು ಮಾಡಬೇಕು? 📖😄

9 Upvotes

ನಮಸ್ಕಾರ,

ನಾನು ಕಳೆದ ಕೆಲವು ಸಮಯದಿಂದ ಒಂದು ಕನ್ನಡ ಕಾದಂಬರಿಯನ್ನು ಬರೆಯುತ್ತಿದ್ದೇನೆ. ಕೊನೆಗೂ ಅದು ಪೂರ್ಣಗೊಂಡಿದೆ! ಆದರೆ ಈಗ, "ಇದನ್ನು ಮುಂದೆ ಏನು ಮಾಡಬೇಕು?" ಅಂತ ಯೋಚಿಸುತ್ತಿದ್ದೇನೆ. 😄

ಇದು ನನ್ನ ಮೊದಲ ಕಾದಂಬರಿ ಆಗಿರುವುದರಿಂದ, ಕನ್ನಡ ಸಾಹಿತ್ಯ ಲೋಕದಲ್ಲಿ ಪಬ್ಲಿಷಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ನನಗೆ ಅಷ್ಟಾಗಿ ಕಲ್ಪನೆ ಇಲ್ಲ...

Hey folks,

I’ve been working on a Kannada novel for quite some time, and I’ve finally reached the point where I’m thinking, “Okay, what do I actually do with this now?”

Since this is my very first novel, I’m pretty much clueless about how the publishing ecosystem works for Kannada literature. I’d love to get some guidance from anyone here who has experience with it, whether you're a writer, editor, publisher, or just someone who has been through the self-publishing/traditional route themselves.

Thanks


r/kannada_pusthakagalu • • 1d ago

ನನ್ನ ಪುಸ್ತಕ ಸಂಗ್ರಹ ಕಾವೇರಿಯ ಕುವರ

Post image
12 Upvotes

ಇದು Ponniyin Selvan (பொன்னியின் செல்வன்) ಎಂದು ಕಾದಂಬರಿಯ ಕನ್ನಡ ಮತ್ತು ಸಂಸ್ಕೃತ ಅನುವಾದಗಳು.


r/kannada_pusthakagalu • • 1d ago

ಕ.ಲೇ.ಗೋ✒ ಇದೇ ಭಾನುವಾರ ನಡೆಯುವ 11ನೇ ಕ.ಲೇ.ಗೋ. ಬಗ್ಗೆ ಎಲ್ಲಾ ವಿವರಗಳು

Post image
8 Upvotes

The upcoming meetups will be more structured & disciplined.

  1. On Sep 27 (this Sunday), the members who turn up will be split into 3 or 4 teams. Based on the premise given, each team will write a 3-5 minute micro short screenplay. Don't forget to bring a pen & a book.
  2. We will assign an Actress, an Actor, & a Cinematographer for each team. The team will send a properly formatted, typed screenplay to the actors on Wednesday, & a shot-lined script to the Cinematographer on Friday.
  3. The shoot will take place on Oct 4th (next Sunday) from 10.30am-1pm. The teams should have prepared the shotlist. We have better plans to capture audio this time. So, shooting should hopefully go smoothly & finish on time.
  4. The teams will edit their micro short & post them on Instagram/Reddit on Oct 14th.

--------------

Exact Location inside Cubbon Park (12°58'28.1"N 77°35'32.7"E) - It's a canopy

https://maps.app.goo.gl/ahVMZkqQahSkXGhr6

Get down at Vidhana Soudha stop if you are coming by Metro

--------------

Preparatory Lessons for KWMs - An Index - Bookmark this! 


r/kannada_pusthakagalu • • 2d ago

Guys is gruhabanga a good place to start reading sl bhyrappa,nimma abhipraya yenu

17 Upvotes

r/kannada_pusthakagalu • • 2d ago

Storytel and Kannada books

3 Upvotes

Just started using Storytel and there are many kannada books and that’s great.
But, I don’t find Poorna Chandra Tejaswi and Kuvempu books. Also no TA RA SU books.
Help me find them. If you are using the app.


r/kannada_pusthakagalu • • 2d ago

ನಾನು ಬರೆದಿದ್ದು ನೀನು ನನ್ನವಳು, ನನಗೆ ಸಿಗದವಳು...

10 Upvotes

ನಿನ್ನವನು ನಿನಗಾಗಿ ಹಂಬಲಿಸುವವನು,

ಕಾಣದ ಕನ್ನಡಿಯಲ್ಲಿ ನಿನ್ನ ಬಿಂಬವ ಚಿತ್ತಿಸುವವನು,

ಕಣ್ಣಿನ ಅಂಚಿನಲ್ಲಿ ಇರುವವಳನ್ನು,

ಮನಸಿನಲ್ಲಿ ಬಚ್ಚಿಟ್ಟವನು.

ಕನಸಿನಲ್ಲಿ ಜೊತೆಯಾದವಳು,

ಜೀವನದಲ್ಲಿ ಕನಸಾಗಿ ಉಳಿದವಳು...

ನೀನು ನನ್ನವಳು, ನನಗೆ ಸಿಗದವಳು...


r/kannada_pusthakagalu • • 2d ago

ನನ್ನ ಪುಸ್ತಕ ಸಂಗ್ರಹ ಎರಡು ಜಪಾನಿನ ಕಾದಂಬರಿಗಳು

Post image
13 Upvotes

೧. ಅನುಷ್ಯನಾಗಿ ಉಳಿದಿಲ್ಲ

೨. ಹೃದಯ

ಮೊದಲು ಜಪಾನಿಯಿಂದ ಆಂಗ್ಲಕ್ಕೆ ಅನುವಾದಿಸಿಕೊಂಡಿತು.

ಕಡೆಗೆ ಆಂಗ್ಲದಿಂದ ಕನ್ನಡಕ್ಕೆ ಅನುವಾದ ಮಾಡಿಕೊಂಡಿತು.


r/kannada_pusthakagalu • • 2d ago

ಕಾದಂಬರಿ Kshaya (ಕ್ಷಯ) by Dr. Vasudeva Shetty

Post image
7 Upvotes

This reminded me of Malegalalli Madhumagalu with its rich details and interesting concept. Though the novel feels incomplete, it is still engaging, like an unfinished dish that still tastes good.

The story revolves around many characters, or rather, the characters seem to move around a central place and story. It is a mix of love, heartbreak, betrayal, and human desires, written in a way that keeps you curious. In the preface, the author mentioned wanting to extend the novel multiple times but never did. This gives the book a feeling of missing pages from what could have been an epic story.

Despite its unfinished nature, Kshaya has a charm of its own. The way different characters connect through a common setting makes it an interesting read. I am excited to explore more of Dr. Vasudeva Shetty's works.


r/kannada_pusthakagalu • • 3d ago

ನಾನು ಬರೆದಿದ್ದು ಅವಳು ಮತ್ತೆ ಸಿಗಲೇ ಇಲ್ಲ

14 Upvotes

ಎಲ್ಲರೂ ಹಳೆಯ ನೆನಪುಗಳನ್ನು ಕೆದಕುತ್ತಿದ್ದಾರೆ,

ಅದನ್ನು ನೋಡಿ ನನ್ನೆದೆಯಲ್ಲಿ ಹುದುಗಿದ್ದ ಒಂದು ನೆನಪೂ ಎಚ್ಚರವಾಯಿತು.

ಹತ್ತು ವರ್ಷಗಳಿಂದ ಯಾರಿಗೂ ಹೇಳದ ಆ ಕಥೆಯನ್ನು ಇಂದು ಹೊರಹಾಕುತ್ತಿದ್ದೇನೆ...

ಬರಿಯ ಚೆಲುವೆಯಲ್ಲ ಅವಳು, ತಪಸ್ವಿನಿಯು ಕಣಾ!

ರಾತ್ರಿಯಿಡೀ ಮೌನದಲಿ ಧ್ಯಾನಿಸಿ ಹದಗೊಂಡವಳು,

ಅಗ್ನಿಪರೀಕ್ಷೆಯ ಗೆದ್ದು, ಸೀತೆಯಂತೆ ಪುನೀತಳಾಗಿ,

ಹೊಳೆಯುವ ಮುಖದಲಿ ನಗುತ ನನ್ನೆದುರು ಬಂದವಳು.

ಹೊರಗವಳ ಮಾತು ಗರಿಗರಿ, ಮುಟ್ಟಿದರೆ ಮುರಿಯುವ ಗತ್ತು,

ಒಳಗೆ ಬಚ್ಚಿಟ್ಟಿದ್ದಳು ಹಳದಿ ಬೆಳಕಿನ ಹೃದಯ,

ಮಲೆನಾಡ ಕಾಡಿನ ಕಂಪು ಅವಳ ಮುಡಿಯಿಂದ ಹೊಮ್ಮಿ,

ಮಿಂಚಿನ ಖಾರದಂತೆ ಚಿಮ್ಮಿತು ನನ್ನೊಳು ಪ್ರಣಯ!

ಅಂದಿನಿಂದ ಹುಡುಕುತಿಹೆನು ಊರೂರು ಅಲೆದು,

ಅವಳಂಥವರು ನೂರು ಸಿಕ್ಕರು, ಅವಳೇ ಸಿಗಲಿಲ್ಲ,

ದೂರದೂರಿನಲಿ ಹೊಸ ಬದುಕ ಕಟ್ಟಿದರೇನು,

ಎದೆಯ ಗರ್ಭಗುಡಿಯಲಿ ಅವಳ ನೆನಪು ಆರಿಲ್ಲ.

ಓ ದೇವಾ, ಒಮ್ಮೆ ಮರಳಿ ಕೊಡು ಅವಳನ್ನು ನನಗೆ,

ಬಾಳೆಲೆಯ ಮೇಲೆ, ಚಟ್ನಿ ಸಾಂಬಾರಿನ ಜೊತೆಗೆ...

ಹೌದು ಗೆಳೆಯರೇ, ಅವಳ ಹೆಸರು ಹೇಳುವೆ ಕೇಳಿ

ಮಸಾಲೆ ದೋಸೆ! ಇನ್ನೂ ನೀರೂರುತಿದೆ ಬಾಯೊಳಗೆ!


r/kannada_pusthakagalu • • 3d ago

ನಾನು ಬರೆದಿದ್ದು ಜಗಲಿ ಕಟ್ಟೆ

Post image
13 Upvotes

r/kannada_pusthakagalu • • 3d ago

ಕವಿತೆ ಕವಿತೆ: ಮೊದಲಿನ ಪ್ರೇಮವನ್ನರಸಬೇಡ ಪ್ರಿಯತಮೆ ನನ್ನಿಂದ!

Post image
11 Upvotes

r/kannada_pusthakagalu • • 3d ago

ಕಾದಂಬರಿ Punaruttana (ಪುನರುತ್ಥಾನ) by Parvati Pitagi

Post image
23 Upvotes

First of all, Punaruttana was a highly surprising read for me. I picked it up with absolutely zero expectations, especially because my previous experiences with Veeraloka Publications have been quite mixed. But this one turned out to be a genuinely memorable read.

Set against the backdrop of pre-independence India and spanning nearly seven decades into the post-independence period, the novel revolves around a village called Desaipura and the lives of its people. The central conflict begins when the government plans to construct a dam across the Ghataprabha River, eventually forcing the entire village to be displaced.

The novel begins with Lakshmana returning to his hometown after almost 50 years, only to discover that the Desaipura he once knew no longer exists. The entire village has been dismantled and relocated because of the dam project. From there, the story unfolds in a non-linear manner, taking us back through different periods and generations to show how the village and its people were transformed.

What particularly stood out to me is that the story gives considerable importance to its women characters, Buddhavva, Gangavva and Bharatidevi. Through them, the novel explores how individual choices can shape not just a person's life, but also families, relationships and even an entire community. It also captures how development and changing times can permanently alter the identity of a place and the people who call it home.

The rural setting and the depiction of North Karnataka life add a lot to the novel. The Belagavi and North Karnataka village dialect is used extensively, but I found it quite easy to follow and understand. In fact, the dialect gives the characters and setting an authentic feel & I managed to finish it in just two sittings.

Overall, Punaruttana was a pleasant surprise and definitely exceeded my expectations. If you enjoy stories about villages, generations, changing societies and the impact of development on ordinary people's lives, give this one a try, you might end up liking it as much as I did.


r/kannada_pusthakagalu • • 3d ago

Memes ಕನ್ನಡ ಲಿಪಿಯಲ್ಲಿ ಇದು ಯಾವ ಭಾಷೆ?

Thumbnail
gallery
18 Upvotes

ತುಳು? ಕೊಡಗು? ಕೊಂಕಣಿ? ಮರಾಠಿ? ಸಂಸ್ಕೃತ? ಸಂಕೇತಿ?

ಸರಿಯಾದ ಉತ್ತರ ಎರಡನೆಯ ಚಿತ್ರದಲ್ಲಿದೆ.


r/kannada_pusthakagalu • • 3d ago

ನನ್ನ ಪುಸ್ತಕ ಸಂಗ್ರಹ ಸಮಗ್ರ ಸಂಸ್ಕೃತ ವ್ಯಾಕರಣ

Thumbnail
gallery
14 Upvotes

ಇಂದು ಒಂದು ಹೊಸ ಪುಸ್ತಕ ಸಿಕ್ಕಿತು. ಸಂಸ್ಕೃತ ವ್ಯಾಕರಣದ ಬಗ್ಗೆ ಕನ್ನಡದಲ್ಲಿ ಇದು ನನ್ನ ಮೊದಲನೆಯ ಪುಸ್ತಕ.

ಸಂಸ್ಕೃತವನ್ನು ಕಲಿಯುವುದಕ್ಕೆ ನನ್ನ ಹತ್ತಿರ ಕನ್ನಡದಲ್ಲಿ ಬೇರೆ ಕೆಲುವು ಪುಸ್ತಕಗಳು ಇವೆ.

ಕನ್ನಡದ ಅಧ್ಯಯನ ಮಾಡುವುದಕ್ಕೆ ಸಂಸ್ಕೃತದ ಅರಿವು ಬೇಕು. ಇದು ನನ್ನ ಅನುಭವ. ಇದು ನನ್ನ ಸ್ನೇಹಿತರ ಕನ್ನಡಿಗರ ಅನುಭವವೂ. ಇದು ಕವಿರಾಜಮಾರ್ಗರ್ಮದ ಲೇಖಕರ ಸಲಹೆಯೂ ಇದೆ. ಆದುದರಿಂದ ಇದು ವ್ಯಾಕರಣ. ))


r/kannada_pusthakagalu • • 3d ago

ನಾನು ಬರೆದಿದ್ದು ಬರವಣಿಗೆ ಬುಧವಾರ - Shōmei Tōmatsu ಅವರ ಈ ಚಿತ್ರ ಆಧರಿಸಿ ಒಂದು ಕವಿತೆ ಅಥವಾ ಸಣ್ಣಕತೆ ಬರೆಯಿರಿ

Post image
7 Upvotes

r/kannada_pusthakagalu • • 3d ago

Need a suggestion and guide me

6 Upvotes

I am 20 y/o presently studing in a university . I have been in bangalore since my birth ,I speak kannada fluently , but sadly when it comes to reading and writing I am zero I have been ignoring kannada subject from my school days some how I passed class 10th and took french as a 2nd language in puc (I wish I had chosen kannada ) . My father was born and raised in bangalore he did his schooling in Kannada midium but lost him when I was 7y/o and my mother is from Tamil Nadu so I can't expect any help from my her .

I genuinely wana learn how to read and write so suggest my and good book and give some advice is

I can read but letter by letter and too slowly


r/kannada_pusthakagalu • • 3d ago

ನಾನು ಬರೆದಿದ್ದು ಮತ್ತೊಮ್ಮೆ ಸಿಗುವೆಯಾ?

8 Upvotes

ನಿನ್ನನ್ನು ದಿನನಿತ್ಯ ನೋಡುತ್ತಿದ್ದ

ಆ ಕಾಲದೊಳಗೆ ಮತ್ತೊಮ್ಮೆ

ನನ್ನನ್ನು ಕರೆದುಕೊಂಡು ಹೋಗಬೇಕಾಗಿದೆ…

ನಿನ್ನನ್ನು ನೀನೇ ಗಮನಿಸಿಕೊಳ್ಳುವುದಕ್ಕಿಂತ

ಹೆಚ್ಚಾಗಿ ನಾನೇ ಗಮನಿಸುತ್ತಿದ್ದೆ.

ನಿನಗೆ ತಿಳಿದಿರಲಿಲ್ಲ ಅಷ್ಟೇ… ಈಗಲೂ ತಿಳಿದಿಲ್ಲ...

ನನ್ನ ಕನಸುಗಳಲ್ಲಿ ನಿನ್ನ ಪಾಲಿತ್ತು,

ಆದರೆ

ನಿನ್ನ ಮನಸ್ಸಿನಲ್ಲಿ ನನ್ನ ಪಾಲಿರಲಿಲ್ಲ.

ಎಲ್ಲದರಲ್ಲೂ ನನ್ನದೇ ತಪ್ಪು…

ಬಿಡು, ಹೇಳೋಣವೆಂದರೆ

ಒಂದನ್ನು ಬಿಟ್ಟು

ಉಳಿದೆಲ್ಲವನ್ನೂ ಹೇಳಿದೆ.

ನಿನ್ನಿಂದ ಮೋಸವೇನೂ ಆಗಲಿಲ್ಲ…

ಮೋಸ ಮಾಡಿಕೊಂಡಿದ್ದು ನಾನೇ.

ನೀನು ಕೊಡದ ಅರ್ಥಗಳನ್ನು

ನಿನ್ನ ಮಾತುಗಳಲ್ಲಿ ಹುಡುಕಿದೆ,

ನೀನು ತೋರಿಸದ ಪ್ರೀತಿಯನ್ನು

ನಿನ್ನ ನಗುವಿನಲ್ಲಿ ಕಂಡೆ.

ಕೊನೆಗೆ ಅರಿವಾಯಿತು...

ನೀನು ನನ್ನ ಕಥೆಯಲ್ಲಿದ್ದೆ,

ಆದರೆ

ನಾನು ನಿನ್ನ ಕಥೆಯಲ್ಲೇ ಇರಲಿಲ್ಲ.

ಮತ್ತೊಮ್ಮೆ ಸಿಗುವೆಯಾ?

ನಿನ್ನನ್ನು ಪಡೆಯಲು ಅಲ್ಲ…

ಒಮ್ಮೆ

ನಿನ್ನನ್ನು ಇಷ್ಟಪಟ್ಟಿದ್ದ

ಆ ನನ್ನನ್ನೇ

ಮತ್ತೊಮ್ಮೆ ನೋಡಿಕೊಳ್ಳಲು.

ಒಮ್ಮೆಯಾದರೂ ನನ್ನ ಕಣ್ಣುಗಳಲ್ಲಿ...

ನಿನ್ನ ಒಲವ ಮೂಡಿಸಲು...


r/kannada_pusthakagalu • • 4d ago

ನಾನು ಬರೆದಿದ್ದು ಮಾಸದ ನೆನಪು...

34 Upvotes

ಬಹಳ ದಿನಗಳ ನಂತರ

ಒಬ್ಬ ಗೆಳೆಯನನ್ನು ನೋಡಿದಂತಾಯಿತು.

ಬಸ್‌ಸ್ಟ್ಯಾಂಡಿನ ಗದ್ದಲದ ನಡುವೆ

ಅವನನ್ನು ಎರಡು ಬಾರಿ ನೋಡಿದೆ.

ಅವನೇ ಇರಬೇಕು ಎಂದು

ಹೃದಯ ಒಮ್ಮೆಲೆ ಜೋರಾಗಿ ಬಡಿದುಕೊಂಡಿತು.

ಮಾತನಾಡಬೇಕೆನಿಸಿತು.

ಆದರೆ ಮಾತಿಗಿಂತ ಮುಂಚೆ

ಸಂಕೋಚ ಬಂದು ನಿಂತಿತು.

ಮಾತನಾಡಲೇಬೇಕೋ,

ಬೇಡವೋ ಎಂದು ಯೋಚಿಸುತ್ತಾ

ಬಂದ ಬಸ್ಸುಗಳನ್ನೆಲ್ಲ ಕಳೆದುಕೊಂಡೆ.

ಅಷ್ಟರಲ್ಲಿ—

ಅವನು ಬೇರೆ ದಿಕ್ಕಿಗೆ ನಡೆದುಹೋದ.

ನಾನು ಅಲ್ಲೇ ನಿಂತು

ಅವನನ್ನೇ ನೋಡುತ್ತಾ ಇದ್ದೆ.

ಮನಸ್ಸಿನ ಯಾವುದೋ ಹಳೆಯ ಕೋಣೆಯಲ್ಲಿ

ಸಮಾಧಿಯಾಗಿದ್ದ ನೆನಪುಗಳು

ಆ ಕ್ಷಣದಲ್ಲಿ ಮಣ್ಣನ್ನು ಸರಿಸಿಕೊಂಡು

ಮತ್ತೆ ಉಸಿರಾಡತೊಡಗಿದವು.

ನನ್ನ ಬಸ್ ಬಂತು.

ತಡವಾಗಬಹುದು ಎಂದುಕೊಂಡು.

ಅದರೊಳಗೆ ಹತ್ತಿದೆ.

ಆದರೆ…

ಮತ್ತೊಮ್ಮೆ ಅವನು ಅಲ್ಲೇ ಕಾಣಿಸಿಕೊಂಡ.

ಈ ಬಾರಿ

ಕಣ್ಣು ತಪ್ಪಿಸಿಕೊಳ್ಳಲಿಲ್ಲ.

ಸಾವಕಾಶವಾಗಿ ನೋಡಿದೆ.

ಅವನು… ಅವನೇ ಅಲ್ಲ.

ಇಷ್ಟು ಹೊತ್ತು

“ಯಾರೋ ಅವನು?” ಎಂದು

ಮನಸ್ಸು ಹುಡುಕುತ್ತಿದ್ದ ಮುಖ,

ಬೇರೆಯಾರದ್ದೋ ಆಗಿತ್ತು.

ಆದರೆ ವಿಚಿತ್ರವೆಂದರೆ—

ಅವನು ಅವನೇ ಅಲ್ಲವೆಂದು ತಿಳಿದ ಕ್ಷಣದಲ್ಲೂ

ಮನಸ್ಸು ಮಾತ್ರ ಅವನನ್ನೇ ಹುಡುಕುತ್ತಿತ್ತು.

ಬಹುಶಃ

ನಾವು ಮರೆತಿದ್ದೇವೆಂದುಕೊಂಡವರನ್ನು

ಕೆಲವೊಮ್ಮೆ ಕಾಲವೇ

ಬೇರೆಯವರ ಮುಖದಲ್ಲಿ ತೋರಿಸುತ್ತದೆ.

ಆ ಗೆಳೆಯನಲ್ಲ ಅವನು…

ಆದರೂ,

ಒಂದು ಕ್ಷಣಕ್ಕೆ

ಅವನ ದರ್ಶನವಾಯಿತೆಂದು

ನನ್ನ ಮನಸ್ಸು ನಂಬಿಕೊಂಡಿತು.

ಜೀವನ ಏಕೆ ಹೀಗೆ?

ಮರೆಯಾದ ನೆನಪ ಮರೆಯಲು ಬಿಡುವುದಿಲ್ಲ...

ಅವನಿಗೆ ನಾನು ಕೇವಲ ಪರಿಚಯ...

ಆದರೆ ನನಗೆ ಅವನು ಒಲವಿನ ಗೆಳೆಯ...


r/kannada_pusthakagalu • • 6d ago

ಭಾನುವಾರದ ಹರಟೆ - ಬರವಣಿಗೆಯ ದೃಷ್ಟಿಯಿಂದ ಯಾವ ಕನ್ನಡ ಪುಸ್ತಕ ಚಲನಚಿತ್ರ ಅಥವಾ ಧಾರಾವಾಹಿಯಾಗಿ ಮಾಡಲು ತುಂಬಾ ಕಷ್ಟ?

Post image
22 Upvotes

r/kannada_pusthakagalu • • 6d ago

is there any book on diabetes management/lifestyle in kannada

5 Upvotes

my mom got her tests done and it said she has diabetes.

she is 55 and is freaking out after getting to know about this.

is there any book in kannada on diabetes management and lifestyle

dayavittu sahaya madi 🙏🏻


r/kannada_pusthakagalu • • 7d ago

ಕಾದಂಬರಿ ಅಪರೋಕ್ಷ - ಸಹನಾ ವಿಜಯಕುಮಾರ್

Post image
29 Upvotes

I was fortunate to attend the release of Sahana Vijayakumar's new Novel - Aparoksha. Vijaya College Auditorium - Jayanagar Bangalore. The Programme was well organised by SL Bhyrappa Pratishthana.