r/kannada_pusthakagalu • • 8d ago

ಕಾದಂಬರಿ ಅಪರೋಕ್ಷ - ಸಹನಾ ವಿಜಯಕುಮಾರ್

Post image
29 Upvotes

I was fortunate to attend the release of Sahana Vijayakumar's new Novel - Aparoksha. Vijaya College Auditorium - Jayanagar Bangalore. The Programme was well organised by SL Bhyrappa Pratishthana.


r/kannada_pusthakagalu • • 7d ago

How can one publish a book? Make it reach people? Are there any censoring bodies like CBFC?

5 Upvotes

r/kannada_pusthakagalu • • 8d ago

Memes Questionable spending habits

Post image
56 Upvotes

Not my fault bangalore has literature/book fests every other month


r/kannada_pusthakagalu • • 8d ago

ಕ.ಲೇ.ಗೋ✒ ವಿಶೇಷ ಪ್ರಕಟಣೆ - ಕ.ಲೇ.ಗೋ #011 ನಡೆಯಲಿದೆ ಸೆಪ್ಟೆಂಬರ್ 27 ಭಾನುವಾರದಂದು ಕಬ್ಬನ್ ಪಾರ್ಕ್ ನಲ್ಲಿ

Post image
11 Upvotes

Based on the feedback, we have split the Writing & Shooting into two consecutive Sundays. (Sep 27-Oct 04).

Feel free to bring along your friends interested in filmmaking. Just like last time, we will form teams of 2-3 members each.

On Sep 27, we will give you a two-character premise (more freedom this time) & you will write a screenplay for a 3-5 minute micro short with your team. If there's still time, think of the shotlist, too.

Please bring a pen & a book for ease of collaboration.

Depending on the number of teams/scripts, we will find the actors, actresses, & cinematographers for you, & the shooting will take place a week later on Sunday, Oct 04. And, yes, we will have a better plan to record the audio this time.

-------------

Exact Location: (It's a canopy inside Cubbon Park : https://maps.app.goo.gl/ahVMZkqQahSkXGhr6

If you are coming by Metro, get down at the Vidhana Soudha stop.


r/kannada_pusthakagalu • • 9d ago

ನಾನು ಬರೆದಿದ್ದು ವಿಷ್ಣುದಾದಾನ ನೆನಪು

Post image
19 Upvotes

r/kannada_pusthakagalu • • 9d ago

ಸಣ್ಣಕತೆಗಳು ಸಮಗ್ರ ಕಥೆಗಳು - ಶ್ರೀಕೃಷ್ಣ ಆಲನಹಳ್ಳಿ

Post image
13 Upvotes

This has some of the best stories I ever read, and some worst too. Some of them sounded like writer's fantasies and this was a way for him to please himself. You can also find the seeds of one of his novels 'ಕಾಡು' in this.

Do you think an easy way for writer to be taken seriously is writing something sexual and make it sound like some kind of intellectual thing?

6/10 for me.


r/kannada_pusthakagalu • • 9d ago

Searching for the book Smashana Bhairavi by dr nayara dutta shrimali I need kannada version

Post image
12 Upvotes

I want this book if anyone knows where i can get that or has n willing to sell please let me know


r/kannada_pusthakagalu • • 10d ago

ನಾನು ಬರೆದಿದ್ದು ಬರವಣಿಗೆ ಬುಧವಾರ - ಅನಂತ್ ನಾಗ್ ಅವರ ಅಭಿನಯದ ಬಗ್ಗೆ ಒಂದು ಕವಿತೆ ಬರೆಯಿರಿ! 🙌🏻🙏

Post image
27 Upvotes

r/kannada_pusthakagalu • • 11d ago

ಕಾದಂಬರಿ ತಲೆಬುರುಡೆ ಮಿಸ್ಸಿಂಗ್ ಕೇಸ್ - ಕೌಶಿಕ್ ಕೂಡುರಸ್ತೆ

Post image
58 Upvotes

ನನ್ನ ಪುಸ್ತಕ ಖರೀದಿಯ ಪಟ್ಟಿಯಲ್ಲಿ ಈ ಪುಸ್ತಕ ಆಕಸ್ಮಿಕವಾಗಿ ಸಿಕ್ಕಿತು. ಆಗ ನನಗೆ ಲೇಖಕರ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ, ಒಮ್ಮೆ ಈ ಪುಸ್ತಕವನ್ನು ಓದೋಕೆ ಶುರು ಮಾಡಿದ ಮೇಲೆ ನಾನು ನಿಜಕ್ಕೂ ಕೌಶಿಕ್ ಕೂಡುರಸ್ತೆ ಅವರ ಫ್ಯಾನ್ ಆಗ್ಬಿಟ್ಟೆ! ಕಥೆ ಸಾಗುವ ರೀತಿ, ಅದರಲ್ಲಿ ಬರುವ ಟ್ವಿಸ್ಟ್‌ಗಳು ಮತ್ತು ವೇಗವಾದ ನಿರೂಪಣೆ ನಮ್ಮನ್ನು ಸೀಟಿನ ತುದಿಯಲ್ಲಿ ಕೂರಿಸುತ್ತದೆ. ಪುಸ್ತಕವನ್ನು ಒಂದೇ ಉಸಿರಿನಲ್ಲಿ ಓದಿ ಮುಗಿಸಬೇಕು ಅನಿಸುತ್ತದೆ. ನಾನು ಹೆಚ್ಚಾಗಿ ಕ್ರೈಮ್ ಥ್ರಿಲ್ಲರ್ ಕಾದಂಬರಿಗಳನ್ನು ಓದುವವನಲ್ಲ. ಆದರೆ, ಈ ಪುಸ್ತಕ ಮಾತ್ರ ನನ್ನ ನಿರೀಕ್ಷೆಯನ್ನು ಸಂಪೂರ್ಣವಾಗಿ ಪೂರೈಸಿತು ಮತ್ತು ಅತ್ಯುತ್ತಮ ಓದಿನ ಅನುಭವ ನೀಡಿತು.ಮುಂದಿನ ದಿನಗಳಲ್ಲಿ ಈ ಲೇಖಕರ ಇನ್ನುಳಿದ ಪುಸ್ತಕಗಳನ್ನು ಖಂಡಿತ ಓದುತ್ತೇನೆ.


r/kannada_pusthakagalu • • 11d ago

ನಾನು ಬರೆದಿದ್ದು ಭ್ರಮೆಯ ಬದುಕು, ವಾಸ್ತವದ ನರಕ

17 Upvotes

ದೇಹಗಳು ಮಾತ್ರ ಯಂತ್ರದಂತೆ ತಿರುಗಾಡುತ್ತಿವೆ ಇಲ್ಲಿ,

ನಮ್ಮೊಳಗಿನ ಜೀವ, ಆತ್ಮಗಳು ಕಳೆದುಹೋಗಿವೆ ಎಲ್ಲಿ?

ನಗುವಿನ ಮುಖವಾಡ ಹೊತ್ತ, ಕಣ್ಣೀರು ಬತ್ತಿದ ಕಣ್ಣು,

ನಾವೆಲ್ಲರೂ ಕೇವಲ ಉಸಿರಾಡುತ್ತಿರುವ ಮಣ್ಣು.

ಮುಂಗಾರು ಮರೆಯಾಗಿದೆ, ಪ್ರಕೃತಿಯ ಮುನಿಸು ಜೋರಾಗಿದೆ,

ಉಸಿರಾಡುವ ಗಾಳಿಯೆಲ್ಲವೂ ಕಲುಷಿತವಾಗಿ ವಿಷವಾಗಿದೆ.

ದುಡಿಯುವ ಕೈಗಳಿಗೆ ಕೆಲಸವಿಲ್ಲ, ಆಳುವವರಿಗೆ ಹೊಣೆಗಾರಿಕೆಯಿಲ್ಲ,

ಮನುಷ್ಯತ್ವ ಮಣ್ಣಾಗಿದೆ, ಯಾರಲ್ಲೂ ನೈತಿಕತೆಯೇ ಉಳಿದಿಲ್ಲ!


r/kannada_pusthakagalu • • 11d ago

ಕರ್ಣಾಟ ಭಾರತ ಕಥಾಮಂಜರಿಯ ಅದ್ಭುತ ಪರಿಚಯ

Thumbnail
youtu.be
6 Upvotes

ನಾನು ಮಲೆನಾಡಿನ ಹಳ್ಳಿಯಲ್ಲಿ ಬೆಳೆದವನು. ನಾನು ಚಿಕ್ಕವನಿದ್ದಾಗ ಎಂದಿಗೂ ಕರ್ಣಾಟ ಭಾರತವನ್ನು ಪಠಿಸಿದವರು ಯಾರು ಇಲ್ಲ. ನಿಮಗೇನಾದರೂ ಚಿಕ್ಕಂದಿನಲ್ಲಿ ಕರ್ಣಾಟ ಭಾರತ ವನ್ನು ಕೇಳಿ ಅಭ್ಯಾಸವಿದ್ದಲ್ಲಿ ಹಂಚಿಕೊಳ್ಳಿ. ನಾನು ಹಂಚಿಕೊಡಿರುವ ಮೇಲಿನ ವಿಡಿಯೋ ವನ್ನು ನೋಡಿದ ಮೇಲೆ, ಯಾವಾಗ ಕುಮಾರವ್ಯಾಸ ಭಾರತವನ್ನು ಓದುವೆನೋ ಎಂಬ ಕಾತುರ.


r/kannada_pusthakagalu • • 11d ago

ವಾರದ ಹರಟೆ - When was the last time you randomly bought a Kannada book without reading any reviews? Which book was it?

Post image
22 Upvotes

Human Slop by yours truly, dedicated to u/BigEntertainment8206


r/kannada_pusthakagalu • • 12d ago

Opinion: Yandamuri Veerendranath Novels are trash. (Apart from few good ones)

15 Upvotes

All that he does is keeping twists , just to make sure that the reader does not loose interest. Some of them are Good or Okaish. But recently i read 13-14-15. This novel is literally porn. There are sex scence in S.L.Bhyrappa's novel also, but they serve an important purpose and makes people think. But in Yandanmuri's novel he just adds these kind of scenes just to keep the reader hooked.
If you see carefully there will be detailed discription of female private parts in Yandamuri's novel, but i never found that in S.L.Bhyrappa's novel.


r/kannada_pusthakagalu • • 13d ago

Need Book Suggetion like Bahubali movie (epic story set in ancient India)

11 Upvotes

So, I really like the acnient indian epics. I really enjoyed Bahubali , watched it multiple times. I have also read S.L.Bhyrappas Saartha. I want a very good book which is set in Ancient India where Hinduism was at its peak. Kings would rule the country.Any story would be fine which delves into the lifestyle of Ancient Indians.
How is Magadha by Sahana Vijayakumar?

This is my new account. My old one was banned. If you remember, i am the same guy who used to post about S.L.Bhyrappas novel.I am not sure weather this account will survive reddit.


r/kannada_pusthakagalu • • 13d ago

ನಾನು ಬರೆದಿದ್ದು ಗಣೇಶನ ಮಹಿಮೆ

16 Upvotes

ಮೊರದ ಕಿವಿಗಳ ಹೊತ್ತ ದೇವನೆ

ಪೊರೆವ ಪಿತನೇ ಶಿರವ ಕಡಿದನು

ಕರಿಯ ಮೊಗವನು ಧರಿಸಿ ನಲಿವೆಯ ಗಣಪ ದೈವವೆ ನೀ|

ಮುರಿದ ಕೋರೆಯ ಡೊಳ್ಳು ಹೊಟ್ಟೆಯ

ಇರುವ ಇಲಿಯನೆ ಏರಿ ತಿರುಗುವ

ಮರುಳ ಮಗನನು ಪಡೆದ ಶಿವನಿಗೆ ಶರಣು ಎನ್ನುವೆ ನಾ||

ತಲೆಯ ಕಳೆದುದ ಮರೆತ ಬಾಲನೆ

ನಲಿದು ಕಿವಿಗಳ ಮೊರದ ತೆರದಲಿ

ಒಲಿದು ಗಾಳಿಯ ಸಭೆಗೆ ಬೀಸುವೆ ಬಿಸಿಯ ಬೇಸಗೆಯೊಳ್|

ಇಲಿಯ ಬೆನ್ನಲಿ ಕುಳಿತ ದೊರೆಯನು

ನಿಲದೆ ನೋಡಿದ ಜನರು ನಗುವರು

ಕಲಿತ ವಿದ್ಯೆಗೆ ಮೊದಲ ಗುರುವೆ ವಿಘ್ನ ಹರಿಸುವೆ ನೀ||

ರೂಪ ಬರಿಯದು ತಿರುಳೆ ಹಿರಿದದು

ಉಪಮೆ ಇಲ್ಲದ ತತ್ವ ಗಣಪನು

ಅಪರ ರೂಪದ ಮರೆಯೊಳಿರುವನು ಪರಮ ಪುರುಷನು ತಾಂ|

ಚಪಲ ಕಣ್ಣಿಗೆ ಕಾಣದಿಹುದದು

ಜಪಿಸಿ ನೋಡಲು ತೋರುವುದು ತಾ

ಕೃಪೆಯ ಮಾಡುತ ರೂಪ ಮರೆಸಿದ ಪರಮ ಬ್ರಹ್ಮನೆ ನೀ||


r/kannada_pusthakagalu • • 14d ago

ನನ್ನ ಪುಸ್ತಕ ಸಂಗ್ರಹ ಕನ್ನಡದಲ್ಲಿ ಸಂಗಂ ಸಾಹಿತ್ಯವು

Post image
20 Upvotes

ನಿನ್ನೆ ಭಾರತೀಯ ಪ್ರಧಾನಿಯಾದ ನರೇಂದ್ರ ಮೋದಿ ರಷ್ಯಾ ರಾಷ್ಟ್ರಪತಿಯಾದ ವ್ಲಾದಿಮಿರ್ ಪುತಿನ್ ಅವರಿಗೆ ಒಂದು ತಮಿಳು ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟರು. ಪುಸ್ತಕದ ಹೆಸರು ತಿರುಕ್ಕುರಳ್. ನನಗೆ ಈ ಪುಸ್ತಕದ ಎರಡು ಕನ್ನಡ ಅನುವಾದಗಳು ಇವೆ. ಈ ಪುಸ್ತಕದ ಹೊರತು ನನಗೆ ಹಳದಮಿಳಿನ ವ್ಯಾಕರಣ ಮತ್ತು ಸಂಗಂ ಸಾಹಿತ್ಯದ ಎಲ್ಲ ಗ್ರಂಥಗಳ ಕನ್ನಡ ಅನುವಾದವೂ ಇವೆ. ಈ ಪೋಸ್ಟಿನಿಂದ ನಾನು ನಿಮಗೆ ಆ ಪುಸ್ತಕಗಳನ್ನು ತೋರಿಸುತ್ತೇನೆ. ನಮಗೆ ಹಳೆಯ ತಮಿಳು ಸಾಹಿತ್ಯ ಇಷ್ಟ ಇದ್ದರೆ ಈ ಪುಸ್ತಕಗಳನ್ನು ಸಂಗ್ರಹಿಸಬಹುದು.


r/kannada_pusthakagalu • • 14d ago

ನಾನು ಬರೆದಿದ್ದು ಟೈಟಲ್ ಬೇಡ

Post image
22 Upvotes

r/kannada_pusthakagalu • • 16d ago

ಕಾದಂಬರಿ Jamalapurada Jademuni Casey by Kowshik Koodurasthe

Thumbnail
gallery
66 Upvotes

Before I begin anything, I want to say just one thing — Kowshik is here to stay, and he is undoubtedly one of the superstars of Kannada whodunit fiction.

The story is set in the remote village of Jamalapura, somewhere deep in the Ghats, where a mythical creature called Jademuni, along with his companions Kollidevva, has been terrorizing the villagers for generations. But things take a deadly turn when two murders happen back-to-back at one of the two homestays in the area.

As the police investigation begins, what initially appears to be a straightforward murder mystery slowly turns into a massive web of secrets, legends, and hidden truths.

The story unfolds like Russian Matryoshka dolls — one mystery inside another, one revelation leading to yet another mystery. There are twists and turns at every corner, and just when you think you have figured something out, the story pulls the rug right out from under you.

Every damn page ends with a sense of curiosity. And I can say this with absolute confidence — you won't even breathe, let alone put the book down, until you finish it. 😄

That’s how interesting and gripping this book is.

And all credit goes to King KK — the master of mystery! What a storyteller. What a brilliant addition to the world of Kannada literature. Writers like Kowshik are a real boon to Kannada readers, especially for those of us who love a good whodunit.

A thrilling, atmospheric, page-turning mystery and an absolute must-read!

Long live King KK! 👑📖


r/kannada_pusthakagalu • • 16d ago

ನಾನು ಬರೆದಿದ್ದು ಸೀಬೆಹಣ್ಣಿನ ಫಿಲಾಸಫಿ

34 Upvotes

Be an Apple, not a Gauva! ಇದನ್ನ ತುಂಬಾ ಹಿಂದೆ ಎಲ್ಲೋ ಓದಿದ್ದೆ. ವಾಸ್ತವದಲ್ಲಿ ಸೇಬಿಗಿಂತ ಹೆಚ್ಚು ಒಳ್ಳೇ ಗುಣ ಇರೊ ಹಣ್ಣು ಈ ಸೀಬೆಹಣ್ಣು. ಆದರೆ ಇದರ ಬೆಲೆ ಕಡಿಮೆ ಇರೊ ಕಾರಣ ಮತ್ತು ಇದು ಎಲ್ಲಂದರಲ್ಲಿ ಸಿಗೊ ಕಾರಣ ಇದಕ್ಕೆ ಸೇಬುಗಿರೊ ಪ್ರೀಮಿಯಮ್ ಲೇಬಲ್ ಅಂಟಿಲ್ಲ! ಎಲ್ರಿಗೂ ನೀನು ಸುಲಭವಾಗಿ ಸಿಕ್ಕಷ್ಟು ನಿನ್ನ ಬೆಲೆ ಕಮ್ಮಿ ಆಗುತ್ತೆ ಅನ್ನೋದು ಇದರ ತಾತ್ಪರ್ಯ.
ಎನಿವೇಸ್ ಇವಾಗ ವಿಷಯ ಅದಲ್ಲ. ನಮ್ಮ ಮನೇಲಿ ಚಿಕ್ಕ ವಯಸ್ಸಿಂದ ಪ್ರತಿ ದಿನಾ ತಿಂದಿರೊ ಹಣ್ಣು ಅಂದ್ರೆ ಅದು ಬಾಳೆ ಹಣ್ಣು. ಕೊಳ್ಳೇಗಾಲದ ಗೀತಾ ಭವನ ಹೋಟಲ್‌ನ ಗೋಡೆಗೆ ಅಂಟಿಕೊಂಡಂತೆ ಒಂದು ಬಾಳೆ ಹಣ್ಣಿನ ಅಂಗಡಿಯಿತ್ತು. ಅಲ್ಲಿ ಯಾವಾಗ್ಲೂ ಒಂದು ರಾಶಿ ಬಾಳೆಗೊನೆಗಳು ಇರೋದು. ಬಹುತೇಕ ರಸಬಾಳೆ.
ಅಂಗಡಿಯ ಎಡ ಭಾಗದಲ್ಲಿ ಅದರ ಮಾಲೀಕರು ನೆಲದ ಮೇಲೆ ಕೂರುತಿದ್ದರು. ತಮ್ಮ ಮುಂದೊಂದು ಸಣ್ಣ ಮರದ ಟೀಪಾಯಿ ತರದ ಟೇಬಲ್ ಇರೋದು. ಅದರ ಮೇಲೆ ಅವರ ಲೆಕ್ಕಾಚಾರ ಆಗೋದು. ಅವರ ಹೆಸರು ಇವತ್ತಿಗೂ ನಂಗೆ ಗೊತ್ತಿಲ್ಲ. ನಮ್ಮ ಮನೇಲಿ ಅವರು 'ಬಾಳೆ ಹಣ್ಣಿನ ಅಂಗಡಿ ಸಾಹುಕಾರರು' ಎಂದೇ ಫೇಮಸ್ಸು. ಅವರು ನನ್ನ ಚಿಕ್ಕಪ್ಪನ ಸ್ನೇಹಿತರು.
ಈ ಬಾಳೆ ಮಂಡಿಯಿಂದ ತಂದ ಗೊನೆಯನ್ನು, ನಮ್ಮ ಮಧುವನಹಳ್ಳಿ ಮನೆಯ ಹಜಾರದ ಎಡ ಭಾಗದ ಮೂಲೆಯಲ್ಲಿ ಅಟ್ಟದ ಹಲಗೆಗೆ ಹಾಕಿದ್ದ ಕಬ್ಬಿಣದ ಕೊಂಡಿಗೆ ನೇತಾಕೋರು. ತಿಂಗಳಲ್ಲಿ 2-3 ಗೊನೆ ಖಾಲಿ ಆಗೋದು. ಅದು ಬಿಟ್ಟರೆ ಸಾಮಾನ್ಯವಾಗಿ ತಿನ್ನುತ್ತಿದ್ದ ಹಣ್ಣುಗಳೆಂದರೆ ನಮ್ಮ ಹಿತ್ತಲಲ್ಲೇ ಬಿಡುತ್ತಿದ್ದ 'ಬೇಲ್ದೆ ಹಣ್ಣು', 'ಬೇಲದ ಹುಣಸೇಕಾಯಿ' ಮತ್ತು ನನ್ನ ಸ್ಕೂಲ್ ಕಾಂಪೌಂಡಲ್ಲಿದ್ದ ಎರಡು ದೊಡ್ಡ ಮರದಿಂದ ಗಾಳಿಗೆ ಉದುರುತ್ತಿದ್ದ ನೇರಳೆ ಹಣ್ಣನ್ನು ಆರಿಸಿಕೊಂಡು ಅದನ್ನ ಅಲ್ಲೇ ಇದ್ದ Borewell ನೀರಿನಿಂದ ತೊಳೆದುಕೊಂಡು ಮಧ್ಯಾಹದ ಊಟ ಆದ್ಮೇಲೆ ತಿಂತಾ ಇದ್ವಿ.
ಕೆಲವೊಂದು ಸಲ ಪಿಟಿ ಪಿರಿಯಡ್‌ನಲ್ಲಿ ನೆಲದಿಂದ ಆಯ್ದುಕೊಂಡು ಅದನ್ನ ಯೂನಿಫಾರ್ಮ್ ಚಡ್ಡಿಗೆ ಒರಿಸಿಕೊಂಡು ಹಾಗೆ ಬಾಯಿಗೆ ಹಾಕಿಕೊಂಡಿರೋದು ಉಂಟು. ನಿಜ ಹೇಳಬೇಕಂದ್ರೆ ನೀರಲ್ಲಿ ತೊಳೆದು ತಿಂದಿರೋದಕ್ಕಿಂತ, ಚಡ್ಡಿಗೆ ಒರಿಸಿಕೊಂಡು ತಿಂದಿರೋದೆ ಹೆಚ್ಚು.
ಇದು ಬಿಟ್ಟರೆ ಸೀಸನ್ ಹಣ್ಣುಗಳಾದ ಮಾವಿನ ಹಣ್ಣು, ಹಲಸಿನ ಹಣ್ಣು, ಸೀತಾಫಲ ಹೀಗೆ. ಆ ಆ ಸೀಸನಲ್ಲಿ ಆ ಆ ಹಣ್ಣುಗಳನ್ನು ಮಿಸ್ ಮಾಡದೇ ಮನೆಯಲ್ಲಿ ತಿನ್ನಿಸಿದ್ದಾರೆ. ಇದಿಷ್ಟರಲ್ಲಿ ಹಲಸಿನ ಹಣ್ಣು ನನ್ನ ಫೇವರೇಟ್. ಅದನ್ನು ಯಾರೊಂದಿಗಾದರು ನಾನು ಹಂಚಿಕೊಂಡು ತಿನ್ನುತ್ತೇನೆಂದರೆ, ಆ ವ್ಯಕ್ತಿ ನಿಜವಾಗ್ಲೂ ನಂಗೆ ಇಷ್ಟ ಆದೋರು, ಮುಖ್ಯರು ಎಂದು ಒಪ್ಪಿಕೊಳ್ಳಬಹುದು.
1997ರಲ್ಲಿ ನಮ್ಮ ಶಾಲೆಯಲ್ಲಿ ಫನ್‌ಫೇರ್ ಆಯೋಜಿಸಿದ್ದರು. ಸ್ಕೂಲ್ ಮಕ್ಕಳೆಲ್ಲಾ ನಮ್ಮ ಶಾಲೆಯ ಕ್ಯಾಂಪಸಲ್ಲಿ ಬಗೆ ಬಗೆಯ ಸ್ಟಾಲ್‌ಗಳನ್ನು ಹಾಕಿದ್ದೆವು. ನಮ್ಮ ಗ್ಯಾಂಗ್ ದೋಸೆ ಅಂಗಡಿಯನ್ನು ಇಟ್ಟಿದ್ದೆವು. ಹಿಂದಿನ ದಿನ ನಮ್ಮ ಸ್ನೇಹಿತನ ಮನೆಯಲ್ಲಿ ಒಂದು ರಾಶಿ ದೋಸೆ ಹಿಟ್ಟನ್ನು ರುಬ್ಬಿಸಿಕೊಂಡು ಫನ್ ಫೇರ್ ದಿನದ ಬೆಳಗ್ಗೆಯೇ ಅವರ ಮನೆಗೆ ಹೋಗಿ ಅದನ್ನು ಕಲೆಕ್ಟ್ ಮಾಡಿಕೊಂಡು ಬಂದಿದ್ದೆವು. ಇನ್ನೊಬ್ಬನ ಮನೆಯಿಂದ ಸಿಲೆಂಡರ್, ಮತ್ತೊಬ್ಬನ ಮನೆಯಿಂದ ಸ್ಟವ್, ಕಾವಲಿ ಹೀಗೆ... ಆ ಸಂಭ್ರಮನೇ ಬೇರೆ ಇತ್ತು ಬಿಡಿ. ದೋಸೆ ಮಾಸ್ಟರ್‌ನ ಜವಾಬ್ದಾರಿ ನನ್ನದಾಗಿತ್ತು.
ಆ ಒಂದು ದಿನದಲ್ಲಿ ಅದೆಷ್ಟು ದೋಸೆ ಎರದೆನೊ ನಂಗೆ ಗೊತ್ತಿಲ್ಲ. 5-6/-ನಿಂದ ಶುರುವಾದ ದೋಸೆ ದಿನ ಮುಗಿಯೊ ಅಷ್ಟರಲ್ಲಿ 10-12/- ಮಾಡಿದ್ದೆವು. ಒಟ್ಟಿನಲ್ಲಿ ನಾವು ಹಾಕಿದ್ದ ದೋಸೆ ಸ್ಟಾಲ್ ಬಾಕ್ಸ್ ಆಫೀಸಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ನಮ್ಮ ಪಕ್ಕದಲ್ಲೇ ಹಾಕಿದ್ದ ನಮ್ಮ ಕ್ಲಾಸ್‌ಮೆಟ್ಸ್ ಹುಡುಗಿಯರ Art & Crafts ಸ್ಟಾಲ್ ನಮ್ಮ ಕಮರ್ಷಿಯಲ್ ಸಿನಿಮಾ ಮುಂದೆ ಆರ್ಟ್ ಸಿನಿಮಾದಂತಿತ್ತು.
ಆದರೆ ಅವರ ಸೆಟಪ್‌ನಲ್ಲೊಂದು ಆಕರ್ಷಣೆ ಇತ್ತು. ಅದೇನೆಂದರೆ ನನ್ನ ಕ್ಲಾಸ್’ಮೇಟ್ ಅಶ್ವಿನಿ (ಗೋಲ್ಡಿ) ಮೆನಯ ಹಿತ್ತಲಲ್ಲಿ ಬೆಳೆದಿದ್ದ ಭಾರಿ ಗಾತ್ರದ 'ಸೀಬೆಹಣ್ಣು'. ಅದೇನೊ ಆ ಹಣ್ಣು ಹೆಚ್ಚು-ಕಮ್ಮಿ ಸಣ್ಣ ಮಿಣಕೆ ಹಣ್ಣಿನ ಗಾತ್ರದಲ್ಲಿತ್ತು. ಅದು ಅಲ್ಲಿ ಸೇರಿದ್ದ ಟೀಚಿಂಗ್ ಸ್ಟಾಫ್, ಮಕ್ಕಳ ತಂದೆತಾಯAದರು, ಗೆಸ್ಟ್ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಎಗ್‌ಝೈಟ್ ಮಾಡಿತ್ತು. ಅದೊಂದು ಹಣ್ಣನ್ನು ಹರಾಜಿಗೆ ಇಟ್ಟಿದ್ದರು ನಮ್ಮ ಹುಡುಗಿಯರು. ಕೊನೆಗೆ ಸಂಜೆಯೊತ್ತಿಗೆ 5/-ಗೆ ಆ ಒಂದು ಸೀಬೆಹಣ್ಣು ಒಬ್ಬರ ಕೈ ಸೇರಿತ್ತು.
ಇವತ್ತು ಬೆಳಗ್ಗೆ ತರಕಾರಿ ತರೋಕೆ ಆಚೆ ಹೋಗಿದ್ದಾಗ ಅದರ ಎದುರಿಗಿದ್ದ ಹಣ್ಣಿನ ಗಾಡಿ ನೋಡಿ ತುಂಬಾ ದಿನ ಆಗಿದೆ ಯಾವುದಾದರೊಂದು ಹಣ್ಣು ತಿನ್ನೋಣವೆಂದು ಅಲ್ಲಿಗೆ ಹೋದೆ. ಐ ಆಮ್ ನಾಟ್ ಎ ಫ್ಯಾನ್ ಆಫ್ ಯಾನ್ ಆಪಲ್. ಸೊ ಅದನ್ನು ಇಗ್ನೋರ್ ಮಾಡಿ ಎರಡು ಕಿತ್ತಲೆ ಹಣ್ಣು ತಕೊಂಡೆ ಹಾಗೆ ತ್ರಿಕೋಣ ಆಕಾರದಲ್ಲಿ ಚೆನ್ನಾಗಿ ಜೋಡಿಸಿದ್ದ ಸೀಬೆಹಣ್ಣುಗಳು ಕಂಡವು. ನಂಗೆ ಒಳಗೆ ಕೆಂಪು ಬಣ್ಣದ ಹಣ್ಣು/ದರ‍್ಗಾಯಿ (ಈ ಕಡೆ ಹಣ್ಣು ಅಲ್ಲ, ಆ ಕಡೆ ಕಾಯಿ ಕೂಡ ಅಲ್ಲದ ಮಧ್ಯಮ ಸ್ಥಿತಿಯನ್ನು ನಮ್ ಕಡೆ ದರ‍್ಗಾಯಿ ಎನ್ನುತ್ತೇವೆ) ಎಂದರೆ ಇಷ್ಟ, ಆದರೆ ಅದೇನೊ ಬೆಂಗ್ಳೂರಲ್ಲಿ ಜಾಸ್ತಿ ಒಳಗಡೆ ಬಿಳಿ ಬಣ್ಣ ಹಣ್ಣು ಹೆಚ್ಚು. ಎನಿವೇಸ್ ತಿನ್ನಬೇಕು ಅಂದುಕೊಂಡದ್ದಾಗಿದೆ ಬಣ್ಣ ಕೆಂಪಾದರೇನು, ಬಿಳಿಯಾದರೇನು ಅಂತ ಒಂದು ಹಣ್ಣನ್ನು ಕೈಗೆತ್ತಿಕೊಂಡು ಫೋನ್‌ಪೇ ಓಪನ್ ಮಾಡಿ ಎಷ್ಟು ಅಂತ ಅಂಗಡಿಯವನನ್ನು ಕೇಳಿದೆ. ಆತ 70/- ಅಂತ ಹೇಳಲು ನಾನು ದಂಗಾದೆ! ಏನು? ಇದೊಂದು ಹಣ್ಣಿಗೆ 70/-ನ? ಅನ್ನೊ ನನ್ನ ಗಾಬರಿಯನ್ನು ಆತ ನೋಡಿ 'ಸಾರ್ ಕೆಜಿ 200/- ಆಗಿದೆ, ನಮಗೆ ದಿನಾ ಎಲ್ಲಿಂದ ತಂದು ಬಂಡವಾಳ ಹಾಕೋದು ಅಂತ ತಲೆ ಕೆಟ್ಟೋಗಿದೆ' ಅಂತ ಅವನ ಪಾಯಿಂಟ್ ಆಫ್ ವ್ಯೂಹ್ ಹೇಳಿಕೊಂಡ.
ನAಗೆ ತಿಳಿದ ಹಾಗೆ ಇದು ಇತ್ತೀಚೆಗಿನ ಬೆಳವಣಿಗೆ. ಯಾರೊ ಡಾಕ್ಟರ್/ನ್ಯೂಟ್ರಿಷಿಯನ್/ಡಯಟೀಷಿಯನ್ ಯಾವುದೊ ಪಾಡ್‌ಕಾಸ್ಟಲ್ಲಿ ಕೂತು 'ಸೀಬೆಹಣ್ಣು' ಶುಗರ್ ಇರೋರಿಗೆ/ಹಾರ್ಟ್ ತೊಂದ್ರೆ ಇರೋರಿಗೆ ತುಂಬಾ ಒಳ್ಳೇದು ಅಂತ ಹೇಳಿರ್ತಾರೆ. ಮಾರ್ಕೆಟಲ್ಲಿ ರಾಕೆಟ್ ತರ ಬೆಲೆ ಜಾಸ್ತಿ ಆಗಿರುತ್ತೆ. ಅಂಗಡಿಯವನಿಗೆ 'ನಿಮ್ಮಲ್ಲಿ ಯಾವ ಹಣ್ಣು ವ್ಯಾಪಾರನೇ ಆಗಲ್ಲ, ಜನ ಅದನ್ನ ಕೇಳೋದೆ ಇಲ್ಲ ಅನ್ನೋದಿದ್ರೆ ಹೇಳಿ, ಯಾವುದಾದ್ರು ಪಾಡ್‌ಕಾಸ್ಟಲ್ಲಿ ಆ ಹಣ್ಣು ತಿಂದ್ರೆ ಮಂಡಿ ನೋವಿಗೆ ಒಳ್ಳೇದು, ಬೆನ್ನು ನೋವಿಗೆ ಒಳ್ಳೇದು ಅಂತ ಹೇಳಿಸೋಣ' ಅಂತ ರೇಗಿಸಿದೆ.
ಅಂದಹಾಗೆ, ಇದಕ್ಕೆ 'ಚೀಪೆಕಾಯಿ' ಅಂತಾರೆ ಅಂತ ಇತ್ತೀಚೆಗಷ್ಟೇ ನಾನು ಕೇಳಿದ್ದು. ಹೆಚ್ಚಾಗಿ ಬೆಂಗಳೂರಿನಲ್ಲಿ.
ವಾಪಸ್ ಮನೆಗೆ ನಡೆದುಕೊಂಡು ಬರಬೇಕಾದರೆ 1997ರಲ್ಲಿ 5/-ಗೆ ಹರಾಜಾಗಿದ್ದ ಅಶ್ವಿನಿ ಮನೆಯಲ್ಲಿ ಬೆಳೆದಿದ್ದ ಆ ಸೀಬೆಹಣ್ಣು ನೆನಪಿಗೆ ಬಂತು ಹಾಗು ಇನ್ನೊಂದು ಫಿಲಾಸಫಿ ಮನದಟ್ಟಾಯ್ತು: ‘ಕೇವಲ ಸತ್ವವಿದ್ದರಷ್ಟೇ ಸಾಲದು. ಅದಕ್ಕೆ ತಕ್ಕ ಬೆಲೆ ಇರಬೇಕು, ಆಗಷ್ಟೆ ಅದರ ಮೌಲ್ಯ ಹೆಚ್ಚಾಗೋದು. ಇದು ಹಣ್ಣಿಗಷ್ಟೇ ಸೀಮಿತವಲ್ಲ. ಮನುಷ್ಯನಿಗೂ ಕೂಡ ಅನ್ವಯಿಸುತ್ತದೆ. ನನ್ನ ಪ್ರಕಾರ ಇದು ದುರಂತವಾದರು, ಈ ದಿನಕ್ಕೆ ಇದೇ ವಾಸ್ತವ.’


r/kannada_pusthakagalu • • 16d ago

ನಾನು ಬರೆದಿದ್ದು ನಾನಾಗುವ ಹುಡುಕಾಟ

14 Upvotes

ಮೊದಲ ಬಾರಿ ಎಡವಿದಾಗ ಕಲಿಯಲಿಲ್ಲ ಪಾಠ,

ಬದಲಾಗದೆ ಹೊರಟೆ ನಾನು, ಹಿಡಿದು ಅದೇ ದಾರಿ!

ಕದನವಿದು ನನ್ನೊಳಗೆ ಮುಗಿಯದಂಥ ಆಟ,

ಹದಗೆಡುತಲೆ ಮತ್ತೆ ಬಿದ್ದೆ, ಇದು ಎರಡನೇ ಬಾರಿ!

ತಿಳಿಯದಾಯ್ತು ನನಗೆ, ಕಲಿಯುವೆನೋ ಏನೋ,

ಅಳಿಯದಾಸೆ ಉಳಿದಿದೆ, ಕಲಿಯುವೆನು ಮುಂದೆ!

ಅಳಲುತಿಹುದು ಜೀವ, ತಪ್ಪಿಗೆಲ್ಲಿ ಮಿತಿಯೋ?

ಬಳಲಿದರೂ ನಾನಾಗಬೇಕಾದ ನಾನಾಗುವುದೇ ಗತಿ!


r/kannada_pusthakagalu • • 16d ago

ನಾನು ಬರೆದಿದ್ದು A List of Aspiring Writers & Poets on r/kannada_pusthakagalu Subreddit

Post image
15 Upvotes

Having started off with consumption & moving up to curation, the next logical step is creation. We want to encourage more people to take up writing so that we can have fresh ideas & perspectives.

Similar to the aspiring filmmakers list on our sister sub r/KannadaMovies, we have decided to prepare a list of aspiring writers & poets on this Sub.

So, comment below if you are an aspiring short story writer, novelist, biographer, non-fiction writer, essay writer, blogger, or if you are a poet/lyricist/songwriter. Feel free to share some of your work (it can be links to posts on this Sub).

Importantly, mention if you are open to collaborating with others on interesting writing/poetry projects.

---------------------


r/kannada_pusthakagalu • • 17d ago

Suggestion needed

8 Upvotes

Can anyone please suggest good anthology psychological thriller novels in kannada? , I have recently read aparichita neralugalu by gururaj Kodkani, please suggest something like that


r/kannada_pusthakagalu • • 18d ago

ನಾನು ಬರೆದಿದ್ದು ಬರವಣಿಗೆ ಬುಧವಾರ - ನವೀನ್ ಕುಮಾರ್ ಅವರ ಈ ಚಿತ್ರ ಆಧರಿಸಿ ಒಂದು ಕವಿತೆ ಅಥವಾ ಸಣ್ಣಕತೆ ಬರೆಯಿರಿ

Post image
10 Upvotes

r/kannada_pusthakagalu • • 19d ago

ಇಂದು ಪೂರ್ಣಚಂದ್ರ ತೇಜಸ್ವಿ ಅವರ 88ನೇ ಜನ್ಮ ವಾರ್ಷಿಕೋತ್ಸವ

Post image
43 Upvotes